ರೈತಮಿತ್ರರೇ,ರಿಲಯನ್ಸ್ ಫೌಂಡೇಶನ್ ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ.ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಧಾರವಾಡ.ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಕಡಲೆ ಬಿತ್ತನೆ ಮಾಡಿದ 35-40 ದಿನಗಳ ಅಂತರದಲ್ಲಿ ಕುಡಿ ಚಿವುಟಬೇಕು.ಬಿತ್ತಿದ 35 ದಿನಗಳ ನಂತರ 100 ಲೀಟರ್ ನೀರಿನಲ್ಲಿ 2 ಮೀ.ಲೀ ನ್ಯಾಪ್ತಲಿನ್ ಅಸಿಡಿಕ್ ಆಸಿಡ್ ಬೆರೆಸಿ ಸಿಂಪಡಿಸಬೇಕು. ಇದರಿಂದ ಬೆಳೆ ಸಧೃಡ ಮತ್ತು ಆರೋಗ್ಯವಾಗಿ ಬೆಳೆಯುತ್ತದೆ.ಬಿತ್ತಿದ 35 ದಿನಗಳ ನಂತರ ಪ್ರತಿ ಲೀಟರ್ ನೀರಿನಲ್ಲಿ 10 ಮಿಲಿ ಲೀಟರ್ ಟ್ರೈಕಾಂಟನಾಲ್ ಅಥವಾ 1 ಮಿಲಿ ನೈಟ್ರೊಬೆಂಜಿನ್ ಸಸ್ಯವರ್ಧಕವನ್ನು ಸಿಂಪಡಣೆ ಮಾಡುವುದರಿಂದ ಹೂವು ಮತ್ತು ಕಾಯಿಗಳ ಸಂಖ್ಯೆ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 1800 419 8800.
| Comment | Author | Date |
|---|---|---|
| Be the first to post a comment... | ||