ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಸೋಯಾಅವರೆಯಲ್ಲಿ ಕಳೆ ನಿರ್ವಹಣೆಗಾಗಿ ಬಿತ್ತನೆಯಾದ ದಿನ ಅಥವಾ ಮರುದಿನ 1.6 ಲೀಟರ್ ಅಲಾಕ್ಲೋರ್ 50 ಇ. ಸಿ. ಅಥವಾ 0.8 ಲೀಟರ್ ಕ್ಲೋಮ್ಯಾಜೋನ್ 50 ಇ. ಸಿ. ಅಥವಾ 15 ಗ್ರಾಂ ಕ್ಲೋರಿಮ್ಯುರಾನ್ 25 ಡಬ್ಲ್ಯು. ಪಿ. ಅಥವಾ 1.3 ಲೀಟರ್ ಪೆಂಡಿಮಿಥಲಿನ್ 30 ಇ. ಸಿ. ಯನ್ನು 300 ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಪ್ರದೇಶದ ಮಣ್ಣಿನ ಮೇಲೆ ಸಿಂಪಡಿಸಬೇಕು. ಕ್ಲೋರಿಮ್ಯುರಾನ್ ಕಳೆನಾಶಕವನ್ನು ಬಿತ್ತಿದ 15 ದಿವಸಗಳವರೆಗೆ ಸಿಂಪರಣೆ ಮಾಡಬಹುದು. ನಂತರ 20 ರಿಂದ 25 ದಿನಗಳ ಅವಧಿಯಲ್ಲಿ ಒಂದು ಸಾರಿ ಅಂತರ ಬೇಸಾಯ ಮಾಡಬಹುದು.
| Comment | Author | Date |
|---|---|---|
| Be the first to post a comment... | ||