ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಹತ್ತಿ ಬಿತ್ತಿದ 60 ದಿನಗಳವರೆಗೆ ಕಳೆಗಳನ್ನು ಪೂರ್ತಿಯಾಗಿ ಹತೋಟಿಯಲ್ಲಿಡುವುದು ಅವಶ್ಯ. ಬಿತ್ತಿದ ದಿನ ಅಥವಾ ಮರುದಿನ ಪ್ರತಿ ಎಕರೆಗೆ 500 ಗ್ರಾಂ ಡೈಯುರಾನ್ 80 ಡಬ್ಲೂ.ಪಿ. ಅಥವಾ 2 ಲೀಟರ್ ಪೆಂಡಿಮೆಥಲಿನ್ 30 ಇ.ಸಿ. ಅಥವಾ 700 ಮಿಲಿ ಲೀಟರ್ ಪೆಂಡಿಮಿಥಲಿನ್ 38.7 ಸಿ.ಎಸ್ ಕಳೆನಾಶಕವನ್ನು 300 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಬಿತ್ತಿದ 25 ರಿಂದ 30 ದಿನಗಳ ನಂತರ ಎಕರೆಗೆ 300 ಮಿಲಿ ಲೀಟರ್ ಕ್ವಿಜಾಲೋಫಾಪ್ ಇಥೈಲ್ 5 ಇ.ಸಿ. ಹಾಗೂ 300 ಮಿಲಿ ಲೀಟರ್ ಪೈರಿಥಯೋಬ್ಯಾಕ್ ಸೋಡಿಯಂ 10 ಇ.ಸಿ. ಕಳೆನಾಶಕಗಳನ್ನು 300 ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಬೆಳೆಯಲ್ಲಿನ ಕಳೆಗಳ ಮೇಲೆ ಸಿಂಪಡಿಸುವುದರಿಂದ ಎಲ್ಲಾ ರೀತಿಯ ಕಳೆಗಳನ್ನು ನಿಯಂತ್ರಣ ಮಾಡಬಹುದು.
| Comment | Author | Date |
|---|---|---|
| Be the first to post a comment... | ||