ಸೋಯಾಬೀನ್ ನಲ್ಲಿ ಬಸವನಹುಳುಗಳ ನಿರ್ವಹಣೆ

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಸೋಯಾಬೀನ್ ನಲ್ಲಿ ಬಸವನಹುಳುಗಳ ನಿರ್ವಹಣೆಗಾಗಿ ರೈತರು ತಮ್ಮ ಹೊಲಗಳಲ್ಲಿನ ಪರಿಸ್ಥಿತಿಯ ಮೇಲೆ ನಿಗಾ ಇಡಲು ಸೂಚಿಸಲಾಗಿದೆ, ಬಸವನಹುಳುಗಳ ಪ್ರವೇಶವನ್ನು ತಡೆಯಲು ಹೊಲಗಳಲ್ಲಿ ಸುಣ್ಣದ ಅಂಚುಗಳನ್ನು ಇರಿಸಿ. ಮೆಟಲ್ಡಿಹೈಡ್ ಶೇಖಡಾ 2.5 ರಷ್ಟು ಒಣ ಉಂಡೆಯನ್ನು ಬೆಲ್ಲದ ದ್ರಾವಣದಲ್ಲಿ ಕಲಿಸಿ ಸೆಣಬಿನ ಚೀಲದೊಂದಿಗೆ ರಾತ್ರಿಯಿಡೀ ಹೊಲದಲ್ಲಿ ಇರಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಾಗ, ಪ್ರತಿ ಎಕರೆಗೆ ಮಲಾಥಿಯಾನ್ ಶೇಖಡಾ 50 ರಷ್ಟು ಇ ಸಿ ಪ್ರತಿ ಎಕರೆಗೆ  500 ಮಿಲಿ ಲೀಟರ್ ಸಿಂಪಡಿಸಬೇಕು ಅಥವಾ ಇಂಡೋಕ್ಸಾಕಾರ್ಬ್ ಶೇಖಡಾ 15.8 ಇ ಸಿ ಪ್ರತಿ ಎಕರೆಗೆ 100 ಮಿಲಿ ಲೀಟರ್ ರಷ್ಟು ಬೇಕಾಗುವಷ್ಟು ನೀರಿನಲ್ಲಿ ಬೆರೆಸಿ ಬೆಳೆ ಮತ್ತು ನೆಲ ಎರಡರ ಮೇಲೆ ಬೀಳುವಂತೆ ಸಿಂಪಡಿಸಬೇಕು.

Content Files
Content Comments
Likes Dislikes
Comment Author Date
Be the first to post a comment...
Content Tags