ಶೇಂಗಾ ಬೆಳೆಯಲ್ಲಿ ಮೇಲು ಗೊಬ್ಬರಗಳನ್ನು ಕೊಡುವುದು

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಶೇಂಗಾ ಬೆಳೆಗೆ ಮೇಲು ಗೊಬ್ಬರಗಳನ್ನು ಹೂ ಬಿಡುವ ಹಂತದಲ್ಲಿ ಕೊಡುವುದು ಸೂಕ್ತವಾಗಿದೆ. ಪ್ರತಿ ಎಕರೆಗೆ 5 ಕಿಲೋ ಗ್ರಾಂ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡುವುದು ಸೂಕ್ತ. ಹೂ ಬಿಡುವ ಹಂತದಲ್ಲಿ ಶೇಖಡಾ 1 ರಷ್ಟು ಪೊಟ್ಯಾಷ್ ಸಿಂಪರಣೆ ಮಾಡುವುದರಿಂದ ಎಲೆಯ ಅಂಚಿನ ಭಾಗ ಕೆಂಪಾಗುವಿಕೆಯನ್ನು ನಿವಾರಿಸಬಹುದು. ಇಡಿಟಿಎ ರೂಪದ ಶೇಖಡಾ 0.5  ರಷ್ಟು ಸತುವಿನ ಸಲ್ಫೇಟ್ ಮತ್ತು ಶೇಖಡಾ  0.5 ರಷ್ಟು ಕಬ್ಬಿಣದ ಸಲ್ಫೇಟ್,  ಶೇಖಡಾ 0.2 ರಷ್ಟು ಬೋರಾಕ್ಸ್, ಶೇಖಡಾ 0.1 ರಷ್ಟು ಅಮೋನಿಯಂ ಮಾಲಿಬ್ಡೆಟ್ ಮತ್ತು ಶೇಖಡಾ 0.5 ರಷ್ಟು ಕ್ಯಾಲ್ಸಿಯಂ ಸಲ್ಫೇಟ್ ನ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಎರಡುಬಾರಿ ಸಿಂಪಡಣೆಯನ್ನು ಹತ್ತು ದಿನಗಳ ಅಂತರದಲ್ಲಿ ಕೈಗೊಳ್ಳಬೇಕು.

Content Files
Content Comments
1 Likes Dislikes
Comment Author Date
Be the first to post a comment...
Content Tags
Get In Touch

Reliance Corporate Park 5 TTC Industrial Area,

Thane-Belapur Road, Ghansoli,

Navi Mumbai - 400701, Maharashtra

Follow Us

Kisan Grow

Machli

Copyright © 2026 Reliance Foundation. All Rights Reserved.