ಸೋಯಾಅವರೆ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ನಿರ್ವಹಣೆ

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಸೋಯಾಅವರೆ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ನೀಗಿಸಲು ಬೆಳೆ ಹೂವಾಡುವಾಗ ಶೇಖಡಾ 2 ರಷ್ಟು ಯೂರಿಯ ದ್ರಾವಣವನ್ನು ಸಿಂಪಡಿಸಬೇಕು.  ಪ್ರತಿ ಲೀಟರ್ ನೀರಿಗೆ 20 ಗ್ರಾಂ ಯೂರಿಯ ಕರಗಿಸಿ ದ್ರಾವಣವನ್ನು ತಯಾರಿಸಬಹುದು. ಹೂವಾಡಿದ 15 ದಿನಗಳ ನಂತರ ಶೇಖಡಾ 1 ರಷ್ಟು ಪೊಟ್ಯಾಷ್ಸಿಯಂ ನೈಟ್ರೇಟ್ ಸಿಂಪಡಿಸಬೇಕು. ಇದನ್ನು ತಯಾರಿಸಲು ಪ್ರತಿ ಲೀಟರ್ ನೀರಿಗೆ 10 ಗ್ರಾಂ ಪೊಟ್ಯಾಷ್ಸಿಯಂ ನೈಟ್ರೇಟ್ ಅನ್ನು ಬೆರೆಸಿ ಸಿಂಪಡಿಸಬೇಕು. 

Content Files
Content Comments
Likes Dislikes
Comment Author Date
Be the first to post a comment...
Content Tags