ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಜೋಳದ ಬೀಜೋಪಚಾರಕ್ಕಾಗಿ ಪ್ರತಿ ಎಕರೆಗೆ ಬೇಕಾಗುವ ಬೀಜಕ್ಕೆ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮ 12 ಗ್ರಾಂ, ಅಜೋಸ್ಪಿರಿಲಂ 200 ಗ್ರಾಂ ಅಥವಾ ಪಿ ಎಸ್ ಬಿ 200 ಗ್ರಾಂ ಉಪಾಯೋಗಿಸಬಹುದು. ಗಂಧಕ ಬಳಸುವ ಮುಂಚೆ ಪ್ರತಿ ಕಿ. ಗ್ರಾಂ ಬೀಜವನ್ನು ಒಂದು ಲೀಟರ್ ನೀರಿನ ಜೊತೆ 7.5 ಗ್ರಾಂ ಪೊಟ್ಯಾಷಿಯಂ ನೈಟ್ರೇಟ್ ಬೆರೆಸಿದ ಅಥವಾ ಗೋಮೂತ್ರ ಬೆರೆಸಿದ ದ್ರಾವಣದಲ್ಲಿ 8 ಗಂಟೆಗಳ ಕಾಲ ನೆನೆಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಸುಧಾರಿಸುವುದು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.