ಶೇಂಗಾ ಬೆಳೆಯಲ್ಲಿ ಸ್ಪೋಡೋಪ್ಟೆರಾ ಕೀಟದ ನಿರ್ವಹಣೆ

ಶೇಂಗಾ ಬೆಳೆಯಲ್ಲಿ ಸ್ಪೋಡೋಪ್ಟೆರಾ ಕೀಟದ ನಿರ್ವಹಣೆ


ಶೇಂಗಾ ಬೆಳೆಯಲ್ಲಿ ಸ್ಪೋಡೋಪ್ಟೆರ ಹುಳು ಬಹುಭಕ್ಷಕ ಕೀಟವಾಗಿದ್ದು, 400 ರಿಂದ 500 ಮೊಟ್ಟೆಗಳನ್ನು ಗುಂಪಾಗಿ ಎಲೆಯ ಮೇಲ್ಬಾಗದಲ್ಲಿಡುವುದು, ಮರಿಹುಳುಗಳು ಎಲೆಯ ಕೆಳಭಾಗದಲ್ಲಿ ಗುಂಪಾಗಿದ್ದು ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ ನಂತರದ ಹುಳುಗಳು ರಾತ್ರಿಯ ಸಮಯದಲ್ಲಿ ಎಲೆಗಳನ್ನು ತಿನ್ನುವದು ಸಾಮಾನ್ಯ. ಅರೆಮಲೆನಾಡು ಪ್ರದೇಶದಲ್ಲಿ ಆಗಸ್ಟ್ - ಸಪ್ಟೆಂಬರ್ ತಿಂಗಳುಗಳಲ್ಲಿ ಹಾಗೂ ಬೇಸಿಗೆ ಹಂಗಾಮಿನಲ್ಲಿ ಫೆಬ್ರುವರಿ ಮಾರ್ಚ್ ತಿಂಗಳುಗಳಲ್ಲಿ ಇದರ ಬಾಧೆ ಹೆಚ್ಚು. ಇವುಗಳ ನಿವಾರಣೆಗಾಗಿ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. ಅಥವಾ 2 ಮಿ. ಲೀ. ಕ್ವಿನಾಲ್ ಫಾಸ್ 25 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಜೈವಿಕ ಕೀಟನಾಶಕಗಳಾದ ಎನ್.ಪಿ.ಏ. 100 ಎಲ್. ಇ. ಪ್ರತಿ ಎಕರೆಗೆ ಅಥವಾ 5 ಗ್ರಾಂ ಬಿ.ಟಿ. ಅಥವಾ 1 ಗ್ರಾಂ ನ್ಯೂಮೊರಿಯಾ ರಿಲೇಯ್ ಪ್ರತಿ ಲೀ ನೀರಿಗೆ ಬೆರೆಸಿ ಸಾಯಂಕಾಲ ಸಿಂಪರಣೆ ಮಾಡಬೇಕು. ಗೋಮೂತ್ರದಲ್ಲಿ ತಯಾರಿಸಿದ ಶೇ. 5 ರ ಸೀತಾಫಲದ ಎಲೆಯ ಕಾಯವನ್ನು ಸಿಂಪಡಿಸುವುದರಿಂದಲೂ ಹತೋಟಿ ಮಾಡಬಹುದು. ವಿಷಪಾಷಾಣವನ್ನು ಪ್ರತಿ ಎಕರೆಗೆ 20 ಕಿ. ಗ್ರಾಂ ನಂತೆ ಸಾಲುಗಳ ಮಧ್ಯೆ ಸಾಯಂಕಾಲ ಸಿಂಪಡಣೆ ಮಾಡಬೇಕು. ವಿಷಪಾಷಾಣ ತಯಾರಿಸಲು 2 ಕಿ. ಗ್ರಾಂ ಬೆಲ್ಲ, 250 ಮಿಲಿ ಲೀಟರ್ ಮೊನೊಕ್ರೋಟೋಫಾಸ್ 36 ಎಸ್. ಎಲ್. ಒಂದು ಲೀಟರ್ ನೀರಿನೊಂದಿಗೆ ಕರಗಿಸಿ ನಂತರ 2-3 ಲೀಟರ್ ನೀರಿನೊಂದಿಗೆ 20 ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡು ಬೆರೆಸುವುದು.

Content Files
Content Comments
Likes Dislikes
Comment Author Date
Be the first to post a comment...
Content Tags