ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಬಾಗಲಕೋಟೆ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಕರು ಹುಟ್ಟಿದ 7 ದಿನಗಳ ವರೆಗೆ ತಾಯಿ ಹಸುವಿನ ಗಿಣ್ಣುಹಾಲು ಕುಡಿಯುವುದು. ಹುಲ್ಲು ತಿನ್ನಲು ಆರಂಭಿಸುವುದು ಹತ್ತು ದಿವಸಗಳ ಮೇಲೆ. ಮೇವಿಗೆ ಬಂದ 7 ವಾರಗಳ ಅನಂತರ ಕರುವಿಗೆ ಕಾಳಿನ ಮಿಶ್ರಣ ನೀಡಬೇಕು. ಬೆಳೆಯುವ ಕರುಗಳಿಗೆ ನೀರು ಸದಾಕಾಲ ಕೊಡಬೇಕು. ಸ್ವಚ್ಛನೀರಿನ ಜೊತೆ ಉಪ್ಪು ಹಾಗೂ ದೇಹಪೋಷಕ ಖನಿಜಗಳನ್ನು ಕೊಟ್ಟರೆ ಜೀರ್ಣಶಕ್ತಿ ಹೆಚ್ಚುವುದಲ್ಲದೆ ದೇಹವೃದ್ಧಿಯಾಗುವುದು. ಪ್ರತಿ 100 ಕೆಜಿ ದೇಹ ತೂಕಕ್ಕೆ 2 ಕೆಜಿ ರಸಮೇವು ಕೊಟ್ಟರೆ ಕರು ಆರೋಗ್ಯದಿಂದಿರುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನಉಚಿತ ದೂರವಾಣಿ ಸಂಖ್ಯೆ 1800 419 8800. ಧನ್ಯವಾದಗಳು.
| Comment | Author | Date |
|---|---|---|
| Be the first to post a comment... | ||