ರಿಲಯನ್ಸ್ ಫೌಂಡೇಶನ್ ಇವರು ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರ, ತುಕಾನಟ್ಟಿ, ಬೆಳಗಾವಿ. ಇವರ ಸಹಯೋಗದೊಂದಿಗೆ ನೀಡುತ್ತಿರುವ ಸಲಹೆ. ನೀರಾವರಿ ಅನುಕೂಲತೆ ಇದ್ದಲ್ಲಿ ಏಕದಳ ಮತ್ತು ದ್ವಿದಳ ಮೇವಿನ ಬೆಳೆಗಳನ್ನು ಬೆಳೆಸಬಹುದು.ದೀರ್ಘವಾರ್ಷಿಕ ಮತ್ತು ಏಕಕಾಲಿಕ ಬೆಳೆಗಳ ಸಂಯೋಜನೆಯ ಮೂಲಕ ವರ್ಷ ಪೂರ್ತಿ ಮೇವು ಉತ್ಪಾದನೆ ಮಾಡಬಹುದು. ಮೇವಿನ ಬೆಳೆಗಳಾದ ಮೇವಿನ ಜೋಳ, ಗೋವಿನ ಜೋಳ, ಮೇವಿನ ಸಜ್ಜೆ ಜೊತೆಗೆ ಬಹುವಾರ್ಷಿಕ ಬೆಳೆಗಳಾದ ಹೈಬ್ರಿಡ್ ನೇಪಿಯರ್ ಹುಲ್ಲು, ಗಿನ್ನಿ ಇತ್ಯಾದಿ ಬೆಳೆಯಬಹುದು. ಹಾಗೆ ಏಕವಾರ್ಷಿಕ ದ್ವಿದಳ ಮೇವಿನ ಬೆಳೆಗಳಾದ ಮೇವಿನ ಅಲಸಂದಿ, ಮೇವಿನ ಹುರುಳಿ, ಮೇವಿನ ಅವರೇ ಜೊತೆಗೆ ಬಹುವಾರ್ಷಿಕ ದ್ವಿದಳ ಬೆಳೆಗಳಾದ ಕುದುರೆ ಮೆಂತೆ ಇತ್ಯಾದಿ ಬೆಳೆಯುವುದರಿಂದ ವರ್ಷಪೂರ್ತಿ ಮೇವಿನ ಬೆಳೆ ಜಾನುವಾರುಗಳಿಗೆ ಒದಗಿಸಬಹುದು. ಇವುಗಳನ್ನು ಮಿಶ್ರ ಅಥವಾ ಅಂತರ್ ಬೆಳೆಯಾಗಿ ಬೆಳೆಯುವುದರಿಂದ ಮೇವಿನ ಗುಣಮಟ್ಟ ಹೆಚ್ಚುವುದಲ್ಲದೆ ಇಳುವರಿ ಕೂಡ ಹೆಚ್ಚುತ್ತದೆ.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved.