ರಿಲಯನ್ಸ್ ಫೌಂಡೇಶನ್ ಇವರು ಐ ಸಿ ಎ ಆರ್, ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರ, ತುಕಾನಟ್ಟಿ, ಬೆಳಗಾವಿ. ಇವರ ಸಹಯೋಗದೊಂದಿಗೆ ನೀಡುತ್ತಿರುವ ಸಲಹೆ. ನೆರಡಿ ರೋಗವು ಬೆಸಿಲಸ್ ಅಂತ್ರ್ಯಾಸಿಸ್ ಎಂಬ ಸೂಕ್ಷ್ಮಾಣುಗಳಿಂದ ಕಲುಷಿತಗೊಂಡ ಆಹಾರ ಮತ್ತು ನೀರನ್ನು ಸೇವಿಸುವುದರಿಂದ ಈ ರೋಗವು ದನಗಳಲ್ಲಿ ಹರಡುತ್ತದೆ. ರೋಗ ಪೀಡಿತ ಕೆಲವು ಪ್ರಾಣಿಗಳು ಇದ್ದಕ್ಕಿದ್ದ ಹಾಗೆ ಕೆಳಗೆ ಬಿದ್ದು ತಕ್ಷಣ ವಿಪರೀತ ಜ್ವರದಿಂದ ಸಾಯಬಹುದು. ಇನ್ನು ಕೆಲವು ಪ್ರಾಣಿಗಳಲ್ಲಿ ಮೈ ನಡುಗುವುದು, ಆಹಾರ ಮತ್ತು ನೀರನ್ನು ಸೇವಿಸದೇ ಇರುವುದು, ಹೃದಯದ ಬಡಿತ ಮತ್ತು ಉಸಿರಾಟ ಹೆಚ್ಚುವುದು, ಹಾಲಿನ ಪ್ರಮಾಣ ಕಡಿಮೆ ಆಗುವುದು, ದೇಹದ ನಾನಾ ಭಾಗಗಳಲ್ಲಿ ಭಾವು ಬರುತ್ತದೆ. ಮೂಗಿನಿಂದ., ಕಿವಿಯಿಂದ, ಬಾಯಿಯಿಂದ, ಗುದದ್ವಾರದಿಂದ ಕಪ್ಪು ಬಣ್ಣದ ರಕ್ತವು ಬರುತ್ತದೆ. ಪ್ರತೀ ವಷ೯ವೂ ಜನವರಿ ತಿಂಗಳಲ್ಲಿ ಪ್ರಾಣಿಗಳಿಗೆ ಅಂತ್ರ್ಯಾಕ್ಷ್ ಲಸಿಕೆ ಕೊಡಿಸಬೇಕು. ಈ ರೋಗದಿಂದ ಸತ್ತ ಪ್ರಾಣಿಯ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಬಾರದು. ಈ ರೋಗದಿಂದ ಸತ್ತ ಪ್ರಾಣಿಗಳನ್ನು ಸುಡಬೇಕು ಅಥವಾ ಆಳವಾಗಿ ಉಪ್ಪಿನ ಜೊತೆಗೆ ಹೂಳಬೇಕು, ಇಲ್ಲದಿದ್ದರೆ ಈ ರೋಗವು ಬೇರೆ ಪ್ರಾಣಿಗಳಿಗೆ ಹರಡುತ್ತದೆ.
| Comment | Author | Date |
|---|---|---|
| Be the first to post a comment... | ||