ಶೇಂಗಾ ಗಿಡದ ಎಲೆಗಳು ಹಳದಿ ಆಗುವುದರ ನಿರ್ವಹಣೆ

ರಿಲಯನ್ಸ್ ಫೌಂಡೇಷನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಜಿಂಕ್ ಮತ್ತು ಮ್ಯಾಂಗನೀಸ್  ಪೋಷಕಾಂಶದ ಕೊರತೆಯಿಂದಾಗಿ ಶೇಂಗಾ ಗಿಡದ ಎಲೆಗಳು ಹಳದಿ ಆಗುತ್ತವೆ. ನಿರಂತರವಾಗಿ ರಾಸಾಯನಿಕ ಗೊಬ್ಬರವನ್ನು ಭೂಮಿಗೆ ಹಾಕುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಬೆಳೆಗಳಿಗೆ ಬೇಕಾದ ಲಘು ಪೋಷಕಾಂಶಗಳ ಪೂರೈಕೆ ಆಗುವುದಿಲ್ಲ ಅದಕ್ಕಾಗಿ ಸಗಣಿ ಗೊಬ್ಬರ ಅಥವಾ ಎರೆ ಹುಳು ಗೊಬ್ಬರವನ್ನು ಭೂಮಿಗೆ ಹಾಕಬೇಕು.ಇದರಿಂದಾಗಿ ಶೇಂಗಾ ಗಿಡದ ಎಲೆಗಳು ಹಳದಿ ಆಗುವುದು ನಿವಾರಣೆ ಆಗುತ್ತದೆ. 

Content Files
Content Comments
Likes Dislikes
Comment Author Date
Be the first to post a comment...
Content Tags