ರಿಲಯನ್ಸ್ ಫೌಂಡೇಶನ್ ಇವರು ಕೆ.ಎಲ್.ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ, ಬೆಳಗಾವಿ. ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಮುಂಗಾರು ಹಂಗಾಮಿನಲ್ಲಿ ಗುಣಮಟ್ಟದ ಹಾಗೂ ಅಧಿಕ ಇಳುವರಿ ನೀಡುವ ತಳಿಗಳ ಬೀಜವನ್ನು ರೈತರಿಗೆ ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ಕೆವಿಕೆ ಮತ್ತಿಕೊಪ್ಪದ ಆವರಣದಲ್ಲಿ 26 ಮೇ 2023 ರ ಸಮಯ ಬೆಳಿಗ್ಗೆ 09:00 ರಿಂದ ಸಂಜೆ 06:00 ರವರೆಗೆ ಬೀಜ ಮೇಳವನ್ನು ಆಯೋಜಿಸಲಾಗಿದೆ. ಬೀಜ ಮೇಳದಲ್ಲಿ ಉತ್ತಮ ಗುಣಮಟ್ಟದ ಹೆಸರು,ಉದ್ದು,ಸೋಯಾ, ಅವರೆ,ಶೇಂಗಾ ಹಾಗೂ ಈರುಳ್ಳಿ ಬೀಜ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಜೈವಿಕ ಶಿಲಿಂಧ್ರನಾಶಕ, ತೋಟಗಾರಿಕೆ ಸಸಿಗಳು ಹಾಗೂ ಎರೆಹುಳು ಗೊಬ್ಬರ ದೊರೆಯುತ್ತವೆ. ಈ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ರೈತ ಭಾಂಧವರು ಭಾಗವಹಿಸಿ ಬೀಜ ಮೇಳದ ಪ್ರಯೋಜನ ಪಡೆಯಬೇಕೆಂದು ಕೋರಲಾಗಿದೆ.
| Comment | Author | Date |
|---|---|---|
| Be the first to post a comment... | ||