ರಿಲಯನ್ಸ್ ಫೌಂಡೇಶನ್ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಇವರ ಸಹಯೋಗದೊಂದಿಗೆ ಮೀನುಗಾರರಿಗೆ ನೀಡುತ್ತಿರುವ ಮಾಹಿತಿ ದಿನಾಂಕ 03 ಆಗಸ್ಟ್ 2025 ರ ರಾತ್ರಿ ರವರೆಗೆ ಮಂಗಳೂರು ನಿಂದ ಮುಲ್ಕಿ ವರೆಗೆ ಸಮುದ್ರದಲ್ಲಿ ಅಲೆಗಳ ಎತ್ತರ 2.7 ರಿಂದ 2.8 ಮೀಟರ್. ಬೈಂದೂರು ನಿಂದ ಕಾಪು ವರಗೆ 2.7 ರಿಂದ 2.9 ಮೀಟರ್ ಹಾಗು ಮಜಾಲಿ ಯಿಂದ ಭಟ್ಕಳ ವರಗೆ 2.8 ರಿಂದ 3.0 ಮೀಟರ್ ಅಲೆಗಳ ಎತ್ತರ ಇರುವ ಸಂಭವ ಇದೆ. ಭಾರತ ಹವಾಮಾನ ಇಲಾಖೆ ಮಾಹಿತಿಯಂತೆ ಕರ್ನಾಟಕದ ಕರಾವಳಿಯಾದ್ಯಂತ ದಿನಾಂಕ ಆಗಸ್ಟ್ 4 ಮತ್ತು 5, 2025 ರಂದು ಗಾಳಿಯು ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ, ಕೆಲವೊಮ್ಮೆ 60 ಕಿ ಮೀ ವೇಗದಲ್ಲಿ ಬೀಸುವ ಹಾಗೂ ಸಮುದ್ರವು ಒರಟಾಗಿರುವ ಸಾಧ್ಯತೆಯಿದೆ.ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800 ಧನ್ಯವಾದಗಳು.
Comment | Author | Date |
---|---|---|
Be the first to post a comment... |
Copyright © 2025 Reliance Foundation. All Rights Reserved.