ಸೋಯಾ ಅವರೆಯಲ್ಲಿ ಕೀಟ ನಿರ್ವಹಣೆ ಬಗ್ಗೆ ಕೃಷಿ ಇಲಾಖೆಯಿಂದ ಮಾಹಿತಿ

ಬೆಳಗಾವಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಸಹಯೋಗದೊಂದಿಗೆ ರಿಲಯನ್ಸ್ ಫೌಂಡೇಷನ್ ಇವರು ರೈತರಿಗೆ ನೀಡುತ್ತಿರುವ ಮಾಹಿತಿ. ಬೆಳಗಾವಿ ಜಿಲ್ಲೆಯ ರೈತ ಭಾಂಧವರಲ್ಲಿ ಒಂದು ಮನವಿ. ಸೋಯಾಬೀನ್ ಬೆಳೆಯಲ್ಲಿ ಹೊಸದಾಗಿ ಒಂದು ಕೀಟವು ಹಾನಿ ಮಾಡುತ್ತಿದ್ದು ಇದರ ಹೆಸರು ಹಸಿರು ಕಾಯಿಕೊರಕ ಅಥವಾ ಹೆಲಿಕೋವರ್ಪಾ ಆಗಿದೆ. ಇದು ಇದೇ ವರ್ಷ ಮೊದಲ ಬಾರಿಗೆ ಒಮ್ಮೆಲೆ  ಸೋಯಾಅವರೆ ಮತ್ತು ಹೆಸರು ಬೆಳೆಯಲ್ಲಿ ಕಾಣಿಸಿಕೊಂಡಿದ್ದು ಈ ಕೀಟದ ಹತೋಟಿಗಾಗಿ  ಬ್ರೊಪಿಲೊನಿಡೆ 300 ಜಿ/ಎಸ್.ಸಿ. 0.1 ಮಿಲಿ ಪ್ರತಿ ಲೀಟರ್ ನೀರಿಗೆ ಅಥವಾ ಬ್ರೋಪಿಲೊನಿಡೆ 20% ಎಸ್.ಸಿ 0.2 ಮಿಲಿ ಪ್ರತಿ ಲೀಟರ್ ಗೆ ಬೆರೆಸಿ ಪ್ರತಿ ಎಕರೆಗೆ 13 ರಿಂದ 14 ಪಂಪು ಎಂದರೆ ಸುಮಾರು 200 ಲೀಟರ್ ನೀರಿನಲ್ಲಿ ಬೆರೆಸಿ  ಸಿಂಪಡಿಸಿ. ಮತ್ತು ನಿಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಿ ಎಂದು ವಿನಂತಿಸುತ್ತೇವೆ.

Content Files
Content Comments
Likes Dislikes
Comment Author Date
Be the first to post a comment...
Content Tags