ರಿಲಯನ್ಸ್ ಫೌಂಡೇಶನ್ ಇವರು ಹವಾಮಾನ ಸೇವಾ ಘಟಕ, ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಇವರ ಸಹಯೋಗದೊಂದಿಗೆ ನೀಡುತ್ತಿರುವ ಹವಾಮಾನ ಆಧಾರಿತ ಕೃಷಿ ಸಲಹೆ. ಗದಗ ಜಿಲ್ಲೆಗೆ ನೀಡಿದ ಹವಾಮಾನ ಮುನ್ಸೂಚನೆಯ ಪ್ರಕಾರ ಮುಂದಿನ ಐದು ದಿನಗಳ ಕಾಲ ಮೋಡ ಕವಿದ ವಾತಾವರಣ ಇದ್ದು ಹಗುರ ಪ್ರಮಾಣದ ಮಳೆಯಾಗುವ ಸಾದ್ಯತೆ ಇದೆ. ಶೇಂಗಾ ಬೆಳೆಯಲ್ಲಿ ಎಲೆ ತಿನ್ನುವ ಸ್ಪೋಡೋಪ್ಟೆರಾ ಹಾಗೂ ಕಪ್ಪು ತಲೆ ಕಂಬಳಿ ಹುಳದ ನಿರ್ವಹಣೆ ಮಾಡಲು ಮೊದಲು ಹುಳುಗಳ ಮೊಟ್ಟೆ ಗುಂಪುಗಳನ್ನು ಮತ್ತು ಮರಿ ಕೀಡೆಗಳಿರುವ ಎಲೆಗಳನ್ನು ಕಿತ್ತು ನಾಶಪಡಿಸಬೇಕು. ಬಿತ್ತಿದ ಸುಮಾರು 35 ರಿಂದ 40 ದಿನಗಳಲ್ಲಿ ಜೈವಿಕ ಕೀಟನಾಶಕಗಳಾದ ನುಮೋರಿಯಾ ರಿಲ್ಲೈ ಅನ್ನು1 ಕಿಲೋ ಗ್ರಾಂ ಅಥವಾ ಎನ್.ಪಿ.ವಿ.-100 ಎಲ್.ಇ. ನಂಜಾಣುವನ್ನು 240 ಲೀಟರ್ ನೀರಿನೊಂದಿಗೆ ಬೆರೆಸಿ ಪ್ರತಿ ಎಕರೆಗೆ ಸಿಂಪಡಿಸಬೇಕು.
Comment | Author | Date |
---|---|---|
Be the first to post a comment... |
Copyright © 2025 Reliance Foundation. All Rights Reserved.