ರಿಲಯನ್ಸ್ ಫೌಂಡೇಶನ್ ಇವರು ಹವಾಮಾನ ಸೇವಾ ಘಟಕ, ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಇವರ ಸಹಯೋಗದೊಂದಿಗೆ ನೀಡುತ್ತಿರುವ ಹವಾಮಾನ ಆಧಾರಿತ ಕೃಷಿ ಸಲಹೆ. ಗದಗ ಜಿಲ್ಲೆಗೆ ನೀಡಿದ ಹವಾಮಾನ ಮುನ್ಸೂಚನೆಯ ಪ್ರಕಾರ ಮುಂದಿನ ಐದು ದಿನಗಳ ಕಾಲ ಮೋಡ ಕವಿದ ವಾತಾವರಣ ಇದ್ದು ಹಗುರ ಪ್ರಮಾಣದ ಮಳೆಯಾಗುವ ಸಾದ್ಯತೆ ಇದೆ. ಮಳೆ ನೀರಿನಿಂದ ಪ್ರಾಣಿಗಳ ಕೊಟ್ಟಿಗೆಗಳಲ್ಲಿ ತೇವಾಂಶದಿಂದ ಹರಡುವ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸುರಕ್ಷಿತ ನೀರಿನ ಸಾಗಣೆಗೆ ಸಾಕಷ್ಟು ಒಳಚರಂಡಿ ಸೌಲಭ್ಯಗಳನ್ನು ಒದಗಿಸ ಬೇಕು. ಸಾಧ್ಯವಾದಷ್ಟು ಎತ್ತರದ ಸ್ಥಳಗಳಲ್ಲಿ ಪ್ರಾಣಿಗಳನ್ನು ಕಟ್ಟಿಹಾಕಿ, ಕೊಟ್ಟಿಗೆಯ ನೆಲ ಮತ್ತು ಗೋಡೆಯನ್ನು ಸ್ವಚ್ಛವಾಗಿಡಬೇಕು ಮತ್ತು ಸುಣ್ಣದ ದ್ರಾವಣದಿಂದ ಲೇಪಿಸಬೇಕು.
Comment | Author | Date |
---|---|---|
Be the first to post a comment... |
Copyright © 2025 Reliance Foundation. All Rights Reserved.