ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಗದಗ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಡಿ.ಎಚ್ -86 ತಳಿಯು ಬಿತ್ತನೆ ಮಾಡಿದ 110-115 ದಿವಸಕ್ಕೆ ಕಟಾವಿಗೆ ಬರುತ್ತದೆ. ಟಿ. ಎ.ಜಿ 24 ತಳಿಯು 115-120 ದಿವಸಕ್ಕೆ ಕಟಾವಿಗೆ ಬರುತ್ತದೆ. ಕೆ.ಆರ್. ಜಿ 1 24 ತಳಿಯು 115-120 ದಿವಸಕ್ಕೆ ಕಟಾವಿಗೆ ಬರುತ್ತದೆ. ಟಿ.ಜಿ.ಎಲ್.ಪಿ.ಎಸ್ -3 ಈ ತಳಿಯು ದೊಡ್ಡ ಗಾತ್ರ ಮತ್ತು ಉದ್ದನೆಯ ಕಾಳು ಮತ್ತು ರಪ್ತಿಗೆ ಸೂಕ್ತವಾಗಿರುತ್ತದೆ. ಆರ್-2001-3 ತಳಿಯು 105-110 ದಿವಸಕ್ಕೆ ಕಟಾವಿಗೆ ಬರುತ್ತದೆ. ಕದಿರಿ-9 105-110 ದಿವಸಕ್ಕೆ ಕಟಾವಿಗೆ ಬರುತ್ತದೆ. ಡಿ.ಎಚ್-245 ತಳಿಯು 105-108 ದಿವಸಕ್ಕೆ ಕಟಾವಿಗೆ ಬರುತ್ತದೆ. ಡಿ.ಎಚ್-232 ತಳಿಯು 105-108 ದಿವಸಕ್ಕೆ ಕಟಾವಿಗೆ ಬರುತ್ತದೆ. ಡಿ.ಎಚ್ -40 ಹಾಗೂ ಕೆ.ಆರ್.ಜಿ -1 ತಳಿಗಳಾದಲ್ಲಿ ಪ್ರತಿ ಎಕರೆಗೆ 40 ಕಿ.ಗ್ರಾಂ ಬಿತ್ತನೆ ಬೀಜ ಹಾಗೂ ಉಳಿದ ತಳಿಗಳಿಗೆ 60 ಕಿ. ಗ್ರಾಂ ಬಿತ್ತನೆ ಬೀಜ ಬಳಸಬಹುದು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.