ತೊಗರಿ ಬಿತ್ತನೆಯ ವಿಧಾನ

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೀದರ್ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ  ಸಲಹೆ. ಬೀಜ ಮತ್ತು ರಾಸಾಯನಿಕ  ಗೊಬ್ಬರಗಳನ್ನು ಏಕಕಾಲಕ್ಕೆ ಬಿತ್ತುವ  ಕೂರಿಗೆಯಿಂದ ಬಿತ್ತಬೇಕು. ಬಿತ್ತುವಾಗ ಶಿಫಾರಿಸಿದ  ಎಲ್ಲ ರಸಗೊಬ್ಬರಗಳನ್ನು ಹಾಕಬೇಕು. ಜೊತೆಗೆ ಬಿತ್ತನೆಯ ಸಾಲಿನಲ್ಲಿ ಎಕರೆಗೆ 1.6 ಟನ್ ಕೊಟ್ಟಿಗೆ ಗೊಬ್ಬರ ಅಥವಾ 0.8  ಟನ್ ಎರೆಹುಳು ಗೊಬ್ಬರ ಹಾಕುವುದರಿಂದ  ಪಡೆಯಬಹುದು. ಅಧಿಕ ಇಳುವರಿ ಪಡೆಯಬಹುದು. ಬೀಜಗಳಲ್ಲಿ ಬರ ನಿರೋಧಕತೆ ಹೆಚ್ಚಿಸಲು ಬೀಜಗಳನ್ನು ಶೇ 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 1 ತಾಸು ನೆನೆಸಿ ನಂತರ ನೆರಳಿನಲ್ಲಿ ಕನಿಷ್ಠ 7 ತಾಸು ಒಣಗಿಸಬೇಕು. ಈ ರೀತಿ ಕಠಿಣಗೊಳಿಸಿದ ಬೀಜವನ್ನು ರೈಜೋಬಿಯಂ, ರಂಜಕ ಕರಗಿಸುವ ಪಿ. ಎಸ್ .ಬಿ ಹಾಗೂ ಪಿ.ಜಿ. ಪಿ. ಆರ್  ಅಣುಜೀವಿ ಗೊಬ್ಬರದಿಂದ ಉಪಚರಿಸಬೇಕು. 

Content Files
Content Comments
1 Likes Dislikes
Comment Author Date
Be the first to post a comment...
Content Tags