ಸೋಯಾಬೀನ್ ಬೆಳೆಯಲ್ಲಿ ಎಲೆ ತುಕ್ಕು ರೋಗ ನಿರ್ವಹಣೆ ಹಾಗೂ ಪೋಷಕಾಂಶ ಕೊರತೆ ನಿರ್ವಹಣೆ
ರಿಲಯನ್ಸ್ ಫೌಂಡೇಶನ್ ಕೃಷಿ ಸಲಹೆ. ಹೂ ಬಿಡುವ ಸಮಯದಲ್ಲಿ ಸೋಯಾಬೀನ್ ತುಕ್ಕು ರೋಗವನ್ನು ನಿಯಂತ್ರಿಸಲು ಪ್ರತಿ ಲೀಟರ್ ನೀರಿಗೆ ಹೆಕ್ಸಾಕೋನಜೋಲ್ 1 ಮಿ.ಲೀ. (5 EC) ಅಥವಾ ಪ್ರೊಪಿಕೋನಜೋಲ್ 1 ಮಿ.ಲೀ. (25 EC) ಬೆರೆಸಿ ಸಿಂಪಡಣೆ ಮಾಡಬೇಕು.ಹೂ ಬಿಡುವ ಪ್ರಾರಂಭದ ಸಮಯದಲ್ಲಿ ಉಳಿದ ಶೇ. 50ರಷ್ಟು ಯೂರಿಯಾವನ್ನು ಮೇಲ್ಗೊಬ್ಬರವಾಗಿ ನೀಡಬೇಕು.ಪೋಷಕಾಂಶಗಳ ಕೊರತೆಯನ್ನು ನಿವಾರಿಸಲು ಬೆಳೆಗೆ 19:19:19 ರಸಗೊಬ್ಬರವನ್ನು ಸಿಂಪಡಣೆ ಮಾಡಬೇಕು. ಕಳೆಗಳನ್ನು ನಿಯಂತ್ರಿಸಲು ಒಂದು ಬಾರಿ ಅಂತರ ಬೇಸಾಯ ಕೈಗೊಳ್ಳಬೇಕು. ಸಂಪರ್ಕಿಸಿ
WhatsApp ಚಾಟ್‌ಬಾಟ್ ಸಂಖ್ಯೆ: 8779500400
ಮಾಹಿತಿ ಮೂಲ: ಗ್ರಾಮೀಣ ಕೃಷಿ ಹವಾಮಾನ ಸೇವೆ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ.
ನಿಮ್ಮ WhatsApp ಗೆ ನೇರವಾಗಿ ನಿಯಮಿತ ಕೃಷಿ ಸಲಹೆಗಳು ಮತ್ತು ಉಪಯುಕ್ತ ಮಾಹಿತಿಯನ್ನು ಪಡೆಯಿರಿ.