ಹವಾಮಾನ ಮುನ್ಸೂಚನೆ, ಮಳೆಗಾಲದಲ್ಲಿ ಕುರಿ ಮತ್ತು ಜಾನುವಾರುಗಳ ಆರೈಕೆ ಹಾಗೂ ನಿರ್ವಹಣೆ
ರಿಲಯನ್ಸ್ ಫೌಂಡೇಶನ್ ಪಶುಪಾಲನೆ ಸಲಹೆ. 🌧️ ಕರಾವಳಿ ಕರ್ನಾಟಕ
ಸೆಪ್ಟೆಂಬರ್ 19 ರಿಂದ 24: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ, ಕೆಲವೆಡೆ ಭಾರಿ ಮಳೆ ಗುಡುಗು ಸಹಿತ ಮಳೆ ಹಾಗೂ 30 ರಿಂದ 40 ಕಿ.ಮೀ ಪ್ರತಿ ಗಂಟೆಗೆ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.
🌧️ ಉತ್ತರ ಒಳನಾಡು ಕರ್ನಾಟಕ
ಸೆಪ್ಟೆಂಬರ್ 19 ರಿಂದ 24: ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಪ್ರತಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕೆಲವೆಡೆ ಭಾರಿ ಮಳೆ ಹಾಗೂ 30ರಿಂದ40 ಕಿ.ಮೀ ಪ್ರತಿ ಗಂಟೆಗೆ ವೇಗದ ಗಾಳಿ ಸಾಧ್ಯತೆ.
🌧️ ದಕ್ಷಿಣ ಒಳನಾಡು ಕರ್ನಾಟಕ
ಸೆಪ್ಟೆಂಬರ್ 19ರಿಂದ24: ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಪ್ರತಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಕೆಲವೆಡೆ ಭಾರಿ ಮಳೆ ಹಾಗೂ 30ರಿಂದ40 ಕಿ.ಮೀ ಪ್ರತಿ ಗಂಟೆಗೆ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.
• ಕುರಿ/ಮೇಕೆಗಳನ್ನು ಮುಂಜಾನೆ ಮಂಜಿನಿಂದ ತೇವಗೊಂಡ ಎಳೆಯ ಹುಲ್ಲಿನಲ್ಲಿ ಮೇಯಲು ಬಿಡಬೇಡಿ, ಇದರಿಂದ ಎಂಟರೋಟಾಕ್ಸೀಮಿಯಾ ಅಪಾಯ ಉಂಟಾಗಬಹುದು.
• ಮೇಕೆ/ಕುರಿಗಳಿಗೆ ಪಿಪಿಆರ್ , ಮೇಕೆ ಸಿಡುಬು/ಕುರಿ ಸಿಡುಬು ಹಾಗೂ ಎಂಟರೋಟಾಕ್ಸೀಮಿಯಾ ರೋಗಗಳ ವಿರುದ್ಧ ಲಸಿಕೆ ಹಾಕಿಸಿ.
• ಬಾಹ್ಯ ಪರೋಪಜೀವಿಗಳಿಂದ ಜಾನುವಾರುಗಳನ್ನು ರಕ್ಷಿಸಲು, ಕೊಟ್ಟಿಗೆಯನ್ನು ಸ್ವಚ್ಛವಾಗಿಡಿ. ಕೊಟ್ಟಿಗೆಯಲ್ಲಿ ತುಳಸಿ ಎಲೆಗಳು ಅಥವಾ ಲೆಮನ್‌ಗ್ರಾಸ್‌ನ ಗೊಂಚಲುಗಳನ್ನು ನೇತುಹಾಕಿ. ಬೇವಿನ ಎಣ್ಣೆ ಆಧಾರಿತ ಸೋಂಕುನಾಶಕಗಳನ್ನು ಸಹ ಬಳಸಬಹುದು. ಸಾಧ್ಯವಾದಷ್ಟು ಶುದ್ಧ ಕುಡಿಯುವ ನೀರನ್ನು ಜಾನುವಾರುಗಳಿಗೆ ಒದಗಿಸಿ.ಸಂಪರ್ಕಿಸಿ ವಾಟ್ಸ್ಆಪ್ ಚಾಟ್‌ಬಾಟ್ ಸಂಖ್ಯೆ: 8779500400
ಮಾಹಿತಿ ಮೂಲ: ಗ್ರಾಮೀಣ ಕೃಷಿ ಹವಾಮಾನ ಸೇವೆ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ.
ನಿಮ್ಮ ವಾಟ್ಸ್ಆಪ್ ಗೆ ನೇರವಾಗಿ ನಿಯಮಿತ ಕೃಷಿ ಸಲಹೆಗಳು ಮತ್ತು ಉಪಯುಕ್ತ ಮಾಹಿತಿಯನ್ನು ಪಡೆಯಿರಿ.