ಹವಾಮಾನ ಮುನ್ಸೂಚನೆ ಹಾಗೂ ಮಳೆಗಾಲದಲ್ಲಿ ಕುರಿ ಮತ್ತು ಮೇಕೆಗಳಲ್ಲಿ ರೋಗಗಳ ತಡೆಗಟ್ಟುವಿಕೆ

ರಿಲಯನ್ಸ್ ಫೌಂಡೇಶನ್ ಹವಾಮಾನ ಪಶುಪಾಲನೆ ಸಲಹೆ.
ಕರಾವಳಿ ಕರ್ನಾಟಕ ದಲ್ಲಿ ಸೆಪ್ಟೆಂಬರ್ 23 ರಿಂದ 28 ಈ ಅವಧಿಯಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದ್ದು, ಆರಂಭದಲ್ಲಿ ಹಲವೆಡೆ ಮಳೆಯಾಗಬಹುದು. ಸೆಪ್ಟೆಂಬರ್ 27 ರಿಂದ 28ರಂದು ಮಳೆಯ ಪ್ರಮಾಣ ಕಡಿಮೆಯಾಗಿ ಕೆಲವೆಡೆ ಅಥವಾ ಒಂದು–ಎರಡು ಸ್ಥಳಗಳಲ್ಲಿ ಮಾತ್ರ ಹಗುರ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 23 ರಿಂದ24ರಂದು ಗುಡುಗು ಸಹಿತ ಮಳೆ ಹಾಗೂ ಗಂಟೆಗೆ 30 ರಿಂದ40 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಸೆಪ್ಟೆಂಬರ್ 24ರಂದು ಒಂದು–ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡು ಕರ್ನಾಟಕ ದಲ್ಲಿ ಸೆಪ್ಟೆಂಬರ್ 23ರಿಂದ28 ಈ ಅವಧಿಯಲ್ಲಿ ಹಗುರದಿಂದ ಹಗುರ–ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 23ರಿಂದ24ರಂದು ಗುಡುಗು ಸಹಿತ ಮಳೆ ಹಾಗೂ ಗಂಟೆಗೆ 30ರಿಂದ40 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಹೆಚ್ಚಿದ್ದು, ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 25 ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದು, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಒಂದು–ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡು ಕರ್ನಾಟಕ ದಲ್ಲಿ ಸೆಪ್ಟೆಂಬರ್ 23ರಿಂದ 28: ಈ ಅವಧಿಯಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದ್ದು, ಸೆಪ್ಟೆಂಬರ್ 23ರಿಂದ24ರಂದು ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಈ ದಿನಗಳಲ್ಲಿ ಕೆಲವೆಡೆ ಗುಡುಗು ಸಹಿತ ಭಾರಿ ಮಳೆ ಹಾಗೂ ಗಂಟೆಗೆ 30ರಿಂದ40 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 25ರಿಂದ ಮಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದ್ದು, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಖ್ಯವಾಗಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಕುರಿ/ಮೇಕೆಗಳನ್ನು ಮುಂಜಾನೆ ಮಂಜಿನಿಂದ ತೇವಗೊಂಡ ಎಳೆಯ ಹುಲ್ಲಿನಲ್ಲಿ ಮೇಯಲು ಬಿಡಬೇಡಿ, ಇದರಿಂದ ಎಂಟರೋಟಾಕ್ಸೀಮಿಯಾ ಅಪಾಯ ಉಂಟಾಗಬಹುದು.
• ಮೇಕೆ/ಕುರಿಗಳಿಗೆ ಪಿಪಿಆರ್ , ಮೇಕೆ ಸಿಡುಬು/ಕುರಿ ಸಿಡುಬು ಹಾಗೂ ಎಂಟರೋಟಾಕ್ಸೀಮಿಯಾ ರೋಗಗಳ ವಿರುದ್ಧ ಲಸಿಕೆ ಹಾಕಿಸಿ.
• ಬಾಹ್ಯ ಪರೋಪಜೀವಿಗಳಿಂದ ಜಾನುವಾರುಗಳನ್ನು ರಕ್ಷಿಸಲು, ಕೊಟ್ಟಿಗೆಯನ್ನು ಸ್ವಚ್ಛವಾಗಿಡಿ. ಕೊಟ್ಟಿಗೆಯಲ್ಲಿ ತುಳಸಿ ಎಲೆಗಳು ಅಥವಾ ಲೆಮನ್‌ಗ್ರಾಸ್‌ನ ಗೊಂಚಲುಗಳನ್ನು ನೇತುಹಾಕಿ. ಬೇವಿನ ಎಣ್ಣೆ ಆಧಾರಿತ ಸೋಂಕುನಾಶಕಗಳನ್ನು ಸಹ ಬಳಸಬಹುದು. ಸಾಧ್ಯವಾದಷ್ಟು ಶುದ್ಧ ಕುಡಿಯುವ ನೀರನ್ನು ಜಾನುವಾರುಗಳಿಗೆ ಒದಗಿಸಿ.ಸಂಪರ್ಕಿಸಿ ವಾಟ್ಸ್ಆಪ್ ಚಾಟ್‌ಬಾಟ್ ಸಂಖ್ಯೆ: 8779500400
ಮಾಹಿತಿ ಮೂಲ: ಗ್ರಾಮೀಣ ಕೃಷಿ ಹವಾಮಾನ ಸೇವೆ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ.
ನಿಮ್ಮ ವಾಟ್ಸ್ಆಪ್ ಗೆ ನೇರವಾಗಿ ನಿಯಮಿತ ಕೃಷಿ ಸಲಹೆಗಳು ಮತ್ತು ಉಪಯುಕ್ತ ಮಾಹಿತಿಯನ್ನು ಪಡೆಯಿರಿ.
Content Files
Content Comments
Likes Dislikes
Comment Author Date
Be the first to post a comment...
Content Tags