ರಿಲಯನ್ಸ್ ಫೌಂಡೇಷನ್ ಕೃಷಿ ಸಲಹೆ
ಕಾಳುಮೆಣಸಿನ ಸೊರಗು ರೋಗದ ಸಮಗ್ರ ಹತೋಟಿ ಕ್ರಮಗಳು
• ರೋಗ ಬಾಧೆಯಿಂದ ಸತ್ತು ಹೋದ ಬಳ್ಳಿಗಳನ್ನು ಬೇರುಗಳ ಸಮೇತ ಕಿತ್ತು ತೋಟದಿಂದ ಹೊರಗೆ ತೆಗೆದು ನಾಶಪಡಿಸಬೇಕು.
• ತೋಟಗಳಲ್ಲಿ ನೀರು ನಿಲ್ಲದಂತೆ ಬಸಿಕಾಲುವೆಗಳನ್ನು ನಿರ್ಮಿಸುವುದು ಸೂಕ್ತ.
• ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಬಳ್ಳಿಯ ಬೇರುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು.
• ರೋಗರಹಿತ ಬಳ್ಳಿ ಮತ್ತು ರೋಗಾಣು ಮುಕ್ತ ಮಣ್ಣನ್ನು ಸಸಿ ಮಾಡಲು ಉಪಯೋಗಿಸಬೇಕು.
• ಆಶ್ರಯ ಮರಗಳ ರೆಂಬೆಗಳನ್ನು ತೆಗೆದು, ಬಳ್ಳಿಗೆ ಸೂರ್ಯನ ರಶ್ಮಿ ನೆಲಮಟ್ಟದವರೆಗೂ ತಲುಪುವಂತೆ ನೋಡಿಕೊಳ್ಳಬೇಕು.
• ನೆಲದ ಮೇಲೆ ಹರಡಿರುವ ಹಾಗೂ ಹೆಚ್ಚಾದ ಕವಲು ಬಳ್ಳಿಗಳನ್ನು ಮುಂಗಾರಿನ ಮುನ್ನ ಕತ್ತರಿಸಿ ತೆಗೆಯಬೇಕು. ಉಳಿದ ಬಳ್ಳಿಗಳನ್ನು ಆಶ್ರಯ ಮರಕ್ಕೆ ಕಟ್ಟಿ ಬೆಳೆಯಲು ಬಿಡಬೇಕು.
• ಗಿಡದ ಬುಡದಲ್ಲಿ ಹಸಿರೆಲೆ ಗೊಬ್ಬರ ಹಾಗೂ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಸುವುದರಿಂದ ರೋಗಾಣುವಿನ ಹರಡುವಿಕೆಯನ್ನು ಕಡಿಮೆ ಮಾಡಬಹುದು.
ಮಾಹಿತಿ ಮೂಲ: ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಉಡುಪಿ