ರಿಲಯನ್ಸ್ ಫೌಂಡೇಷನ್ ಕೃಷಿ ಸಲಹೆ
ಸಜ್ಜೆ ಬೆಳೆಯಲ್ಲಿ ತೆನೆ ಜಿಗಿ ರೋಗ ನಿರ್ವಹಣೆ
ತೆನೆ ಜಿಗಿ ರೋಗ ಅಥವಾ ಎರ್ಗಾಟ್ ರೋಗ ದ ಲಕ್ಷಣಗಳು ಸಕ್ಕರೆ ಪಾಕದಂತಹ ದ್ರವವು ತೆನೆಗಳಿಂದ ಜಿನುಗುವುದು. ಎಲೆಗಳ ಮೇಲೆ ಬಿದ್ದು ಕಪ್ಪಾಗಿ ಕಾಣುತ್ತದೆ. ಕಾಲುಗಳ ಸಂಖ್ಯೆ ಕಡಿಮೆಯಾಗುತ್ತದೆ.
ರೋಗ ನಿರ್ವಹಣೆ ಬಿತ್ತನೆ ಬೀಜಗಳನ್ನು ಶೇಕಡಾ 8ರಷ್ಟು ಉಪ್ಪಿನ ದ್ರಾವಣದಲ್ಲಿ ಹಾಕಿ ತೇಲುವ ತೊಳೆದು ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಉಪಯೋಗಿಸಬೇಕು. ಶಿಲೀಂಧ್ರದ ಎರ್ಗಾಟ್ ಕಣಗಳನ್ನು ಬೇರ್ಪಡಿಸಿ, ನಂತರ ಬೀಜಗಳನ್ನು ನೀರಿನಲ್ಲಿ ತೊಳೆದು ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಉಪಯೋಗಿಸಬೇಕು.
ಮಾಹಿತಿ ಮೂಲ :ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ, ಗದಗ.
ಸಂಪರ್ಕಿಸಿ WhatsApp ಚಾಟ್‌ಬಾಟ್ ಸಂಖ್ಯೆ: 8779500400
ನಿಮ್ಮ WhatsApp ಗೆ ನೇರವಾಗಿ ನಿಯಮಿತ ಕೃಷಿ ಸಲಹೆಗಳು ಮತ್ತು ಉಪಯುಕ್ತ ಮಾಹಿತಿಯನ್ನು ಪಡೆಯಿರಿ.