ಕಾಲುಬಾಯಿ ರೋಗ ಮತ್ತು ಚರ್ಮದ ಗಂಟು ರೋಗದಿಂದ ಜಾನುವಾರುಗಳನ್ನು ರಕ್ಷಿಸಲು ಆರೈಕೆ ಮತ್ತು ನಿರ್ವಹಣೆ
ರಿಲಯನ್ಸ್ ಫೌಂಡೇಶನ್ ಜಾನುವಾರು ಸಲಹೆ. ಎಲ್ಲಾ ಜಾನುವಾರುಗಳಿಗೆ ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಕ ಔಷಧಿಯನ್ನು ಪಶುವೈದ್ಯರ ಸಲಹೆಯಂತೆ ನೀಡಬೇಕು.
ಕಾಲು ಮತ್ತು ಬಾಯಿ ರೋಗ ಹಾಗೂ ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಪಶುವೈದ್ಯರ ಸಲಹೆಯಂತೆ ಅಗತ್ಯವಿರುವ ಲಸಿಕೆಗಳನ್ನು ಹಾಕಿಸಬೇಕು.
ಹಾಲು ಕೊಡುವ ಹಸುಗಳಿಗೆ ಹಾಲಿನ ಉತ್ಪಾದನೆಗೆ ಅನುಗುಣವಾಗಿ ಸಮತೋಲಿತ ಆಹಾರ ನೀಡಬೇಕು.
ಜಾನುವಾರುಗಳ ಕೊಟ್ಟಿಗೆಯನ್ನು ಸ್ವಚ್ಛವಾಗಿ ಮತ್ತು ಒಣವಾಗಿಡಬೇಕು. ಸ್ವಚ್ಛವಾದ ಕುಡಿಯುವ ನೀರನ್ನು ನಿರಂತರವಾಗಿ ಒದಗಿಸಬೇಕು.
ಕೊಟ್ಟಿಗೆಯಲ್ಲಿ ನೊಣ, ಉಣ್ಣಿ ಮತ್ತು ಇತರೆ ಕೀಟಗಳ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
ಮಳೆಗಾಲದಲ್ಲಿ ಜಾನುವಾರುಗಳನ್ನು ಮಳೆ, ತೇವಾಂಶ ಮತ್ತು ಚಳಿಯಿಂದ ರಕ್ಷಿಸಲು ಸುರಕ್ಷಿತ ಹಾಗೂ ಒಣ ಕೊಟ್ಟಿಗೆಯಲ್ಲಿ ಇರಿಸಬೇಕು.
ರೋಗದ ಲಕ್ಷಣಗಳು ಕಂಡುಬಂದ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ಪ್ರತ್ಯೇಕವಾಗಿ ಇರಿಸಿ, ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಬೇಕು.ಸಂಪರ್ಕ / ಮಾಹಿತಿ
8779500400
ಮಾಹಿತಿ ಮೂಲ: ಗ್ರಾಮೀಣ ಕೃಷಿ ಹವಾಮಾನ ಸೇವೆ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ
ಸರಿಯಾದ ಕೃಷಿ ಸಲಹೆ – ಸರಿಯಾದ ಸಮಯದಲ್ಲಿ!
📱 WhatsApp ನಲ್ಲಿ “RFIS Karnataka” ಎಂದು Search ಮಾಡಿ, ನಮ್ಮ Channel ಅನ್ನು Follow ಮಾಡಿ.