ತೊಗರಿ ಬೆಳೆಯಲ್ಲಿ ಅಂಗಮಾರಿ ರೋಗದ ನಿರ್ವಹಣೆ ಮತ್ತು ಪೋಷಕಾಂಶಗಳ ಎಲೆ ಸಿಂಪಡಣೆ
ರಿಲಯನ್ಸ್ ಫೌಂಡೇಷನ್ ಕೃಷಿ ಸಲಹೆ
🌱ತೊಗರಿ ಬೆಳೆ ಹೂ ಬಿಡುವ ಹಂತದಿಂದ ಕಾಯಿಕಟ್ಟುವ ಹಂತದವರೆಗೆ
- ಫೈಟೋಫ್ಥೋರಾ ಅಂಗಮಾರಿ ರೋಗದ ನಿಯಂತ್ರಣಕ್ಕೆ: ಒಂದು ಲೀಟರ್ ನೀರಿಗೆ 2 ಗ್ರಾಂ ಮೆಟಲಾಕ್ಸಿಲ್-MZ ಬೆರೆಸಿ ಸಿಂಪಡಿಸಿ.
- ಪಲ್ಸ್ ಮ್ಯಾಜಿಕ್ ಸಿಂಪಡಣೆ: ಮೊದಲ ಸಿಂಪಡಣೆಯನ್ನು ಶೇ. 50ರಷ್ಟು ಹೂ ಬಿಡುವ ಹಂತದಲ್ಲಿ ಹಾಗೂ ಎರಡನೇ ಸಿಂಪಡಣೆಯನ್ನು 15 ದಿನಗಳ ನಂತರ ಮಾಡಿ. ಪ್ರತಿ ಒಂದು ಲೀಟರ್ ನೀರಿಗೆ 10 ಗ್ರಾಂ ಪಲ್ಸ್ ಮ್ಯಾಜಿಕ್ ಬೆರೆಸಿ ಸಿಂಪಡಿಸಿ.
ಪಲ್ಸ್ ಮ್ಯಾಜಿಕ್ ಅನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮತ್ತು ಸರಿಯಾದ ಬೆಳವಣಿಗೆಯ ಹಂತದಲ್ಲಿ ಬಳಸುವುದರಿಂದ ತೊಗರಿ ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳಲ್ಲಿ ಹೂ ಬಿಡುವಿಕೆ ಮತ್ತು ಕಾಳು ಕಟ್ಟುವಿಕೆಗೆ ನೆರವಾಗಬಹುದು
ಸೂಚನೆ: ಔಷಧಿ ಮತ್ತು ಉತ್ಪನ್ನದ ಲೇಬಲ್‌ನಲ್ಲಿರುವ ಸೂಚನೆಗಳನ್ನು ಪರಿಶೀಲಿಸಿ, ಕೃಷಿ ತಜ್ಞರ ಸಲಹೆಯಂತೆ ಬಳಸಿ.ಮಾಹಿತಿ ಮೂಲ: ಭಾರತೀಯ ಹವಾಮಾನ ಇಲಾಖೆ ಮತ್ತು ಗ್ರಾಮೀಣ ಕೃಷಿ ಮೌಸಂ ಸೇವೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು.
ಸರಿಯಾದ ಕೃಷಿ ಸಲಹೆ – ಸರಿಯಾದ ಸಮಯದಲ್ಲಿ!
📱 WhatsApp ನಲ್ಲಿ “RFIS Karnataka” ಎಂದು Search ಮಾಡಿ, ನಮ್ಮ Channel ಅನ್ನು Follow ಮಾಡಿ.