ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಮತ್ತು ಉತ್ತರ ಒಳನಾಡು ಕರ್ನಾಟಕ ಜಿಲ್ಲೆಗಳ ಹವಾಮಾನ ಮುನ್ಸೂಚನೆ

🌦️ ರಿಲಯನ್ಸ್ ಫೌಂಡೇಶನ್ ಹವಾಮಾನ ಮುನ್ಸೂಚನೆ
ಮಾನ್ಯತೆ: 17 ರಿಂದ 22 ಅಕ್ಟೋಬರ್ 2026
ಕರಾವಳಿ ಕರ್ನಾಟಕ: 17ರಂದು ಮೂರು ಜಿಲ್ಲೆಗಳಲ್ಲೂ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. 18 ರಿಂದ 19ರಂದು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. 20 ರಿಂದ 22ರಂದು ಮೂರು ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡು ಕರ್ನಾಟಕ: 17 ರಂದು ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿಯಲ್ಲಿ ಗುಡುಗು ಸಹಿತ ಮಳೆ ಹಾಗೂ ಗಾಳಿ ಬೀಸುವ ಸಾಧ್ಯತೆಯಿದೆ; ಬೀದರ್, ವಿಜಯಪುರ, ಕಲಬುರಗಿ ಮತ್ತು ಯಾದಗಿರಿಯಲ್ಲಿ ಒಣ ಹವಾಮಾನ ಇರಲಿದೆ. 18ರಂದು ಎಲ್ಲಾ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಗಾಳಿ, 19ರಂದು ಅನೇಕ ಸ್ಥಳಗಳಲ್ಲಿ ಹಾಗೂ 20 ರಿಂದ 22ರಂದು ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡು ಕರ್ನಾಟಕ: 17ರಂದು ಚಾಮರಾಜನಗರ, ಮೈಸೂರು ಮತ್ತು ಕೊಡಗಿನಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. 18 ರಿಂದ 19ರಂದು ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಮತ್ತು ಹಾಸನದ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. 20ರಂದು ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. 21 ರಿಂದ 22ರಂದು ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಸಂಪರ್ಕಿಸಿ WhatsApp ಚಾಟ್‌ಬಾಟ್ ಸಂಖ್ಯೆ: 8779500400
ಮಾಹಿತಿ ಮೂಲ: ಭಾರತೀಯ ಹವಾಮಾನ ಇಲಾಖೆ
ನಿಮ್ಮ WhatsApp ಗೆ ನೇರವಾಗಿ ನಿಯಮಿತ ಕೃಷಿ ಸಲಹೆಗಳು ಮತ್ತು ಉಪಯುಕ್ತ ಮಾಹಿತಿಯನ್ನು ಪಡೆಯಿರಿ.
Content Files
Content Comments
Likes Dislikes
Comment Author Date
Be the first to post a comment...
Content Tags