ಹೆಚ್ಚಿನ ಹಾಲಿನ ಉತ್ಪಾದನೆಗಾಗಿ ಪಶುಸಂಗೋಪನಾ ನಿರ್ವಹಣಾ ಪದ್ಧತಿಗಳು
ರಿಲಯನ್ಸ್ ಫೌಂಡೇಶನ್ ನೀಡುತ್ತಿರುವ ಮಾಹಿತಿ
ಪಶುಸಂಗೋಪನಾ ಸಲಹೆಗಳು
- ಕೊಟ್ಟಿಗೆಗಳಲ್ಲಿ ಗಾಳಿಯ ಮುಕ್ತ ಸಂಚಾರಕ್ಕೆ ಸೂಕ್ತವಾದ ಗಾಳಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು.
- ಹಾಲು ಕರೆಯುವ ಜಾನುವಾರುಗಳಿಗೆ ಉತ್ತಮ ಪ್ರಮಾಣ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗಾಗಿ ದ್ವಿದಳ ಮತ್ತು ಏಕದಳ)ಮೇವುಗಳನ್ನು 1:3 ಅನುಪಾತದಲ್ಲಿ ನೀಡಬೇಕು.
- ಹಸಿರು ಮೇವಿನ ವ್ಯರ್ಥವನ್ನು ತಡೆಗಟ್ಟಲು ಮತ್ತು ಮೇವು ಕೊರತೆಯ ಅವಧಿಯಲ್ಲಿ ಲಭ್ಯವಾಗುವಂತೆ ಮಾಡಲು ಹಸಿರು ಮೇವನ್ನು ಸೈಲೇಜ್ ರೂಪದಲ್ಲಿ ಸಂರಕ್ಷಿಸಬೇಕು. ಇದರಿಂದ ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸಬಹುದು.
- ನೀರಾವರಿ ಸೌಲಭ್ಯವಿರುವ ರೈತರು ಮೇವು ಕೊರತೆಯ ಅವಧಿಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಗಾಗಿ ಮೆಕ್ಕೆಜೋಳ, ಜೋಳ ಹಾಗೂ ಇತರ ಹಸಿರು ಮೇವು ಬೆಳೆಗಳನ್ನು ಬೆಳೆಸಬೇಕು.