ರಿಲಯನ್ಸ್ ಫೌಂಡೇಶನ್ ಸಲಹೆ
ಜೀವಾಮೃತ ತಯಾರಿಸುವ ವಿಧಾನ ಹಾಗೂ ಬಳಕೆ
ಇದೊಂದು ಜೈವಿಕ ಕ್ರಿಯೆಗಳಿಂದ ಉತ್ಕೃಷ್ಟಗೊಳಿಸಲ್ಪಟ್ಟ ಪ್ರವರ್ತಕ ಸಾವಯವ ಗೊಬ್ಬರ.
ಬೇಕಾಗುವ ಸಾಮಗ್ರಿಗಳು
ನೀರು 200 ಲೀಟರ್
ಸಗಣಿ 10 ಕೆ.ಜಿ.
ಗೋಮೂತ್ರ 10 ಲೀಟರ್
ಬೆಲ್ಲ 2 ಕೆ.ಜಿ.
ದ್ವಿದಳ ಧಾನ್ಯಗಳ ಪುಡಿ 2 ಕೆ.ಜಿ.
ಬೆಳೆ ಬೆಳೆಯುವ ಫಲವತ್ತಾದ ಮಣ್ಣು (ಬೇರುಗಳಿರುವ ಪ್ರದೇಶದಿಂದ) – ಒಂದು ಹಿಡಿ
ತಯಾರಿಸುವ ವಿಧಾನ
ಒಂದು ಎಕರೆ ಕೃಷಿ ಭೂಮಿಗೆ ಜೀವಾಮೃತವನ್ನು ತಯಾರಿಸಲು 200 ಲೀಟರ್ ಬ್ಯಾರಲ್‌ನಲ್ಲಿ ನೀರನ್ನು ತೆಗೆದುಕೊಳ್ಳಿ.ಮೇಲಿನ ನೀರಿಗೆ ಒಂದು ಮುಚ್ಚಳದ ಬ್ಯಾರಲ್‌ನಲ್ಲಿ 10 ಲೀಟರ್ ಗೋಮೂತ್ರವನ್ನು ಸೇರಿಸಿ. (ನಾಟಿ ಹಸುವಿನ ಗೋಮೂತ್ರವನ್ನು ಬಳಸುವುದು ಉತ್ತಮ).ನಂತರ 10 ಕೆ.ಜಿ. ಸಗಣಿಯನ್ನು ಸೇರಿಸಿ.
ಮೇಲಿನ ದ್ರಾವಣಕ್ಕೆ 2 ಕೆ.ಜಿ. ಬೆಲ್ಲದ ಪುಡಿ ಮತ್ತು 2 ಕೆ.ಜಿ. ದ್ವಿದಳ ಧಾನ್ಯದ ಹಿಟ್ಟನ್ನು ಸೇರಿಸಿ.
ನಂತರ ಒಂದು ಹಿಡಿ ಬೆಳೆ ಬೆಳೆಯುವ ಮಣ್ಣನ್ನು ಸೇರಿಸಿ.
ಮಿಶ್ರಣವನ್ನು ಚೆನ್ನಾಗಿ ಕಲಕಿ. ಬ್ಯಾರಲ್ ಅನ್ನು ನೆರಳಿನಲ್ಲಿಡಿ.
ಈ ಮಿಶ್ರಣವನ್ನು 48 ಗಂಟೆಗಳ ಕಾಲ ಮಾಗಲು ಬಿಡಿ. ದಿನಕ್ಕೆ 2 ರಿಂದ 10 ನಿಮಿಷಗಳವರೆಗೆ ಕಲಕಬಹುದು.
ಪ್ರಯೋಜನಗಳು:ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
ಸಂಪರ್ಕಿಸಿ ವಾಟ್ಸ್ಆಪ್ ಚಾಟ್‌ಬಾಟ್ ಸಂಖ್ಯೆ: 8779500400
ಮಾಹಿತಿ ಮೂಲ: ಕೃಷಿ ಇಲಾಖೆ ಉಡುಪಿ
ನಿಮ್ಮ ವಾಟ್ಸ್ಆಪ್ ಗೆ ನೇರವಾಗಿ ನಿಯಮಿತ ಕೃಷಿ ಸಲಹೆಗಳು ಮತ್ತು ಉಪಯುಕ್ತ ಮಾಹಿತಿಯನ್ನು ಪಡೆಯಿರಿ.