ರಿಲಯನ್ಸ್ ಫೌಂಡೇಶನ್ ಮೂಲಕ ನೀಡುತ್ತಿರುವ ಧ್ವನಿ ಸಂದೇಶ. ಶೇಂಗಾ ಬೀಜವನ್ನು ಭೂಮಿಯನ್ನು ಚೆನ್ನಾಗಿ ಹದಮಾಡಿದ ನಂತರ ಬೀಜ ಹಾಗೂ ಪೂರ್ತಿ ಪ್ರಮಾಣದ ರಸಗೊಬ್ಬರಗಳನ್ನು ಏಕಕಾಲಕ್ಕೆ ಬಿತ್ತನೆ ಮಾಡಬೇಕು. ಶೇ. 75 ರಷ್ಟು ಶಿಫಾರಸ್ಸು ಮಾಡಿದ ರಂಜಕ ಗೊಬ್ಬರದ ಜೊತೆಗೆ ಶೇ. 25 ರಷ್ಟು ರಂಜಕ ಭರಿತ ಜೈವಿಕ ಅನಿಲದ ರಾಡಿಯನ್ನು ಒದಗಿಸುವುದರಿಂದ ಶಿಫಾರಸಿನ ಶೇ.25 ರಷ್ಟು ರಂಜಕ ಕಡಿಮೆ ಮಾಡಬಹುದು. ಬಿತ್ತನೆಗೆ ಮುಂಚೆ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜವನ್ನು 3 ಗ್ರಾಂ ಕ್ಯಾಪ್ಟನ್ 80 ಡಬ್ಲ್ಯೂ.ಪಿ ಅಥವಾ ಥೈರಾಮ್ 75 ಡಬ್ಲ್ಯೂ.ಪಿ ಅಥವಾ ಕಾರ್ಬಾಕ್ಸಿನ್ 75 ಡಬ್ಲ್ಯೂ.ಪಿ ಅಥವಾ 4 ಗ್ರಾಂ ಟ್ರೈಕೋಡರ್ಮಾ ದಿಂದ ಬೀಜೋಪಚಾರ ಮಾಡಬೇಕು. ರೈಜೋಬಿಯಂ ಹಾಗೂ ರಂಜಕ ಕರಗಿಸುವ ಅಣುಜೀವಿ ಜೀವಾಣುವನ್ನು ಬೀಜಕ್ಕೆ ಉಪಚರಿಸಬೇಕು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.