ರಿಲಯನ್ಸ್ ಫೌಂಡೇಶನ್ ಮೂಲಕ ನೀಡುತ್ತಿರುವ ಧ್ವನಿ ಸಂದೇಶ. ತೊಗರಿ ಬೀಜವನ್ನು ಬಿತ್ತನೆ ಮೊದಲು 100 ಕಿ. ಗ್ರಾಂ ಎರೆಹುಳು ಗೊಬ್ಬರದ ಜೊತೆಗೆ 1 ಕಿ. ಗ್ರಾಂ ಮೈಕೋರೈಜಾ ನ್ನು ಮಿಶ್ರಣ ಮಾಡಿ ಪ್ರತಿ ಪಾಲಿಥಿನ್ ಚೀಲ (5*4) ಕ್ಕೆ ಈ ಮಿಶ್ರಣವನ್ನು 15 ಗ್ರಾಂ ನಂತೆ ಹಾಕಬೇಕು. ನಂತರ ಬೀಜಗಳನ್ನು ಉರಿ ಸಸಿಗಳನ್ನು ತಯಾರಿಸಬೇಕು. 25-30 ದಿನಗಳ ಅವಧಿಯ ಸಸಿಗಳನ್ನು ಹದವಾಗಿ ಮಳೆಯಾದ ತಕ್ಷಣ ಅಥವಾ ತಡವಾಗಿ ಮಳೆ ಬಂದಲ್ಲಿ ಸಸಿ ಹಚ್ಚುವ ಸ್ಥಳದಲ್ಲಿ ನೀರು ಕೊಟ್ಟು ಬೆಳೆಯನ್ನು ಲಾಭದಾಯಕವಾಗಿ ಬೆಳೆಯಬಹುದು. ಅಲ್ಲದೇ ನಾಟಿ ಪದ್ದತಿಯಲ್ಲಿ ಹೆಚ್ಚು ಇಳುವರಿ ಮತ್ತು ಉತ್ತಮ ಗುಣಮಟ್ಟದ ಬೀಜೋತ್ಪಾದನೆಯನ್ನು ಕೈಗೊಳ್ಳಬಹುದು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.