ರಿಲಯನ್ಸ್ ಫೌಂಡೇಶನ್ ಕೃಷಿ ವಿಜ್ಞಾನ ಕೇಂದ್ರ, ಬೀದರ್ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಇವರ ಸಹಯೋಗದೊಂದಿಗೆ ರೈತರಿಗೆ ನೀಡುತ್ತಿರುವ ಸಲಹೆ. ತೊಗರಿಯಲ್ಲಿ ನೆಟೆರೋಗದ ನಿರ್ವಹಣೆಗೆ ರೋಗ ನಿರೋಧಕ ತಳಿ ಜಿ ಆರ್ ಜಿ-811, ಜಿ ಆರ್ ಜಿ-152, ಐ.ಸಿ.ಪಿ.ಎಲ್ -8863, ಐ.ಸಿ.ಪಿ.ಎಲ್ -87119 ಉಪಯೋಗಿಸಬೇಕು ಹಾಗೂ ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡಬೇಕು. ಪ್ರತೀ ಕಿ.ಗ್ರಾಂ ತೊಗರಿ ಬೀಜಕ್ಕೆ 5 ಗ್ರಾಂ ಟ್ರೈಕೋಡರ್ಮಾ ಅಥವಾ 5 ಗ್ರಾಂ ಕಾರ್ಬೆನ್ ಡೈಜಿಂ ದಿಂದ ಬೀಜೋಪಚಾರ ಮಾಡಬೇಕು.
| Comment | Author | Date |
|---|---|---|
| Be the first to post a comment... | ||