ಕಡಲೆಯಲ್ಲಿ ತಳಿ ಆಯ್ಕೆ ಹಾಗೂ ಬೀಜೋಪಚಾರ ಮಾಡುವ ವಿಧಾನ  

ರೈತಮಿತ್ರರೇ, ಕಡಲೆ ಸುಧಾರಿತ ತಳಿಯಾದ ಜೆಜಿ-11 ,ಅಣ್ಣಿಗೇರಿ- 1, ಜೆ ಬಿ ಎಸ-964 , ಜೆ ಬಿ ಎಂ-2 ಅಕ್ಟೊಬರ್ ತಿಂಗಳಿನಲ್ಲಿ ಬಿತ್ತನೆ ಮಾಡುವುದರಿಂದ ಮುಂದೆ ಬರುವ ಸೊರಗು ರೋಗವನ್ನು ತಡೆಗಟ್ಟಬಹುದು. ಎಕರೆಗೆ ಬೇಕಾದ ಕಡಲೆ ಬೀಜದಲ್ಲಿ ಬರ ನೊರೋಧಕತೆ ಹೆಚ್ಚಿಸಲು ಮತ್ತು ಸಮನಾಂತರವಾಗಿ ಮೊಳಕೆಯೊಡಯಲು ಶೇ. 2 ರ ಸುಣ್ಣದ ದ್ರಾವಣದಲ್ಲಿ 20 ನಿಮಿಷಗಳ ಕಾಲ ನೆನೆಯಿಡಬೇಕು. ತದನಂತರ ನೆರಳಿನಲ್ಲಿ ಒಣಗಿಸಿ ಅನಂತರ ಬಿತ್ತನೆ ಕೈಗೊಳ್ಳಬೇಕು ಎಕರೆಗೆ ಬೇಕಾದ ಕಡಲೆ ಬೀಜಕ್ಕೆ ಅಣುಜೀವಿಗಳಾದ ರೈಜೋಬಿಯಂ 500 ಗ್ರಾಂ ಮತ್ತು ರಂಜಕ ಕರಗಿಸುವ ಸೂಕ್ಷ್ಮಜೀವಿಯಿಂದ ಉಪಚರಿಸಿ ನಂತರ ಬಿತ್ತನೆ ಮಾಡಬೇಕು. ಈ ಮಾಹಿತಿಯ ಮೂಲವು  ಕೃಷಿ ಸಂಶೋಧನಾ ಕೇಂದ್ರ ಬೀದರ್. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800.

Content Files
Content Comments
Likes Dislikes
Comment Author Date
Be the first to post a comment...
Content Tags